‘ಹೋಂಸ್ಟೇ ಚಿತ್ರದ ಚಿತ್ರೀಕರಣ ಪೂರ್ಣ
Posted date: 14 Wed, May 2014 – 03:09:04 PM

ಸಹನ ಪಿಕ್ಚರ್ಸ್ ಲಾಂಛನದಲ್ಲಿ ಅಣಜಿ ನಾಗರಾಜ್, ಸಿದ್ದುಕೊಣ್ಣೂರ ಹಾಗೂ ಹುಸೇನ್‌ಖಾನ್ ಅವರು ನಿರ್ಮಿಸುತ್ತಿರುವ ‘ಹೋಂಸ್ಟೇ‘ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಚಿತ್ರಕ್ಕೆ ಬೆಂಗಳೂರು, ಮೈಸೂರು, ಮಡಿಕೇರಿ, ವಿರಾಜಪೇಟೆಯಲ್ಲಿ ೩೫ದಿನಗಳ ಚಿತ್ರೀಕರಣ ನಡೆದಿದೆ.  

ಕುತೂಹಲಕಾರಿ ಕಥೆಯುಳ್ಳ ಈ ಚಿತ್ರವನ್ನು ಸಂತೋಷ್ ನಿರ್ದೇಶಿಸುತ್ತಿದ್ದಾರೆ. ಮುಂಬೈನಲ್ಲಿ ರೋಹಿತ್‌ಮಂಜರೇಕರ್ ಅವರ ಬಳಿ ಸಹಾಯಕರಾಗಿದ್ದ ಸಂತೋಷ್ ಅವರಿಗೆ ಇದು ಚೊಚ್ಚಲ ಚಿತ್ರ.
ಆಶ್‌ಲೀ ಅಭಿಲಾಷ್ ಸಂಗೀತ ನಿರ್ದೇಶನ, ನಂದಕಿಶೋರ್ ಛಾಯಾಗ್ರಹಣ, ವಿನೋದ್ ಮನೋಹರ್ ಸಂಕಲನ, ತ್ರಿಭುವನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಆನಂದಪ್ರಿಯ ಸಂಭಾಷಣೆ ಬರೆದಿದ್ದಾರೆ. ಸೈಯಾಲಿಭಗತ್, ಅಶೋಕ್‌ಬಾಲಕೃಷ್ಣನ್, ಶೃತಿ,  ರವಿಕಾಳೆ, ದತ್ತಣ್ಣ, ಜಯಶ್ರೀರಾಜ್, ಅರವಿಂದ್, ರಿಶಬ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed